ಜ್ಯೋತಿಷ ಸಾರಕೋಶ
ಜ್ಯೋತಿಷದ ಕುರಿತು ಒಂದು ಸಮಗ್ರ ಚಿಂತನೆ ಪದಕೋಶ ಮತ್ತು ಮಾಹಿತಿಕೋಶ
ಲೇಖಕರು: ಸುಕುಮಾರ ಆಲಂಪಾಡಿ
ಪುಟಗಳು:632
ಪ್ರಕಾಶಕರು:ಸುಜೀವ ಪ್ರಕಾಶನ
ಪ್ರಥಮ ಮುದ್ರಣ: 2023
ಲೇಖಕರ ಪ್ರಸ್ತಾವನೆ :
ಭಾರತೀಯ ಜ್ಯೋತಿಷ ಶಾಸ್ತ್ರದಲ್ಲಿ ಸಿದ್ಧಾಂತ, ಹೋರಾ, ಸಂಹಿತಾ ಎಂಬ ಮೂರು ಸ್ಕಂಧಗಳಿವೆ. ಸಿದ್ಧಾಂತ ಭಾಗ - ಗಣಿತದಿಂದ ಖಗೋಲದಲ್ಲಿರುವ ಗ್ರಹಗಳ ಚಲನೆಯನ್ನು ಗುರುತಿಸಿ ಅವುಗಳ ಸ್ಥಿತಿಯನ್ನು ದಾಖಲಿಸುತ್ತದೆ. ಹೋರಾಸ್ಕಂದ ವ್ಯಕ್ತಿ ಕೇಂದ್ರಿತ ಚಿಂತನೆಯ ವಿಭಾಗ ವ್ಯಕ್ತಿಯ ಜಾತಕ, ಪ್ರಶ್ನೆ, ಮುಹೂರ್ತಗಳಿಂದ ಆತನ ಜೀವನದ ಆಗುಹೋಗುಗಳನ್ನು ವಿಮರ್ಶಿಸುತ್ತದೆ. ಸಂಹಿತಾದಲ್ಲಿ ವ್ಯಕ್ತಿಯ ವೈಯಕ್ತಿಕ ವಿಚಾರಗಳಿಗೆ ಹೊರತಾದ ಸಮಷ್ಠಿಯ ಚಿಂತನೆ ನಡೆಯುತ್ತದೆ. ವ್ಯಕ್ತಿಯ ಶಾರೀರಿಕ ಲಕ್ಷಣಗಳು, ರಾಷ್ಟ್ರ-ರಾಜಕಾರಣಗಳ ಕುರಿತಾಗಿ, ಪ್ರಕೃತಿಯಲ್ಲಿನ ವೈಪರೀತ್ಯಗಳು ಮಳೆ, ಬೆಳೆ, ಗಾಳಿ, ಉತ್ಪಾತಗಳು ಧೂಮಕೇತುಗಳು ಪ್ರಪಂಚದ ಶುಭಾಶುಭಗಳು ಎಲ್ಲವನ್ನೂ ಸಮಷ್ಠಿಯಾಗಿ ಚಿಂತಿಸುತ್ತದೆ. ಈ ಮೂರು ಸೃಂಧಗಳನ್ನು ಒಟ್ಟಾರೆಯಾಗಿ ನಾವು ಜ್ಯೋತಿಷ ಎಂದು ಕರೆಯುತ್ತೇವೆ. ಇದರಲ್ಲಿ ಸಿದ್ಧಾಂತವನ್ನು ಪ್ರಮಾಣಭಾಗ ಎಂದೂ ಹೋರಾ ಸಂಹಿತಾ ಸೈಂಧಗಳನ್ನು ಫಲಭಾಗವೆಂದೂ ಕರೆಯುತ್ತೇವೆ.
ಸಿದ್ಧಾಂತಕ್ಕೆ ಸೇರಿದ ಗೋಲ, ಗಣಿತ, ಹೋರಾಕ್ಕೆ ಸೇರಿದ ಪ್ರಶ್ನೆ, ಮುಹೂರ್ತಗಳು ಮತ್ತು ಜಾತಕ. ನಿಮಿತ್ತಗಳು ಸೇರಿದಾಗ ಜ್ಯೋತಿಷದ ಫಲಚಿಂತನೆಯ ಷಡಂಗಗಳಾಗುತ್ತವೆ. ನಿಮಿತ್ತ ಎನ್ನುವುದು ಪ್ರಶ್ನೆ. ಮುಹೂರ್ತ ಮತ್ತು ಸಂಹಿತಾಗಳಿಗೂ ಫಲಚಿಂತನೆಯಲ್ಲಿ ಪೂರಕ ವಿಷಯವಾಗುತ್ತದೆ.
ಆದರೆ ಜ್ಯೋತಿಷವೆಂದಾಗ ನಾವು ಮೊದಲಿಗೆ ಕಲ್ಪಿಸಿಕೊಳ್ಳುವುದು ವ್ಯಕ್ತಿ ಕೇಂದ್ರಿತವಾದ ಹೋರಾ ಸ್ಕಂಧದ ಜಾತಕ ವಿಭಾಗವನ್ನು ಇಲ್ಲಿ ವ್ಯಕ್ತಿಗೆ ಸಂಬಂಧಿಸಿ ಚಿಂತಿಸುವಾಗ ಜ್ಯೋತಿಷ ಮನುಷ್ಯನ ಸ್ವಭಾವದ ವಿಶ್ಲೇಷಣೆಗಿರುವ ಒಂದು ಮಾಧ್ಯಮ. ಭವಿಷ್ಯ ಕಥನವನ್ನು ಈ ಆಯಾಮದ ಆಧಾರದಲ್ಲಿಯೇ ಊಹಿಸಬೇಕು ಎಂಬ ಸತ್ಯವನ್ನು ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. Astrology may not be a complete predictive science, but it is definitely a corrective science ಎನ್ನುವ ಅವರ ಚಿಂತನೆ ಈ ಆಧಾರದಲ್ಲಿಯೇ ಆಗಿದೆ. ಈ ರೀತಿಯಾಗಿ ನೋಡಿದಾಗ ಮಾತ್ರ ಜ್ಯೋತಿಷ ಒಂದು ಪರಿಪೂರ್ಣ ವಿಜ್ಞಾನವಾಗಬಹುದು, ಆಗುತ್ತದೆ. ಈ ಆಯಾಮದಿಂದಲೇ ಜ್ಯೋತಿಷದ ಮೌಲ್ಯದ ಸಾಂದ್ರತೆಯನ್ನು ನಾವು ಗುರುತಿಸಿ ಜ್ಯೋತಿಷದ ವೈಜ್ಞಾನಿಕ ತಳಗಟ್ಟನ್ನು ನಿರೂಪಿಸಬೇಕೇ ಹೊರತು ಋಷಿಮುನಿಗಳು ಹೇಳಿದ್ದಾರೆ ಎಂಬ ಗುರಾಣಿಯಿಂದಾಗಲಿ ವೇದಿಕೆಯಲ್ಲಿನ ಭಾವಪೂರ್ಣ ಭಾಷಣಗಳಿಂದಾಗಲಿ ಜ್ಯೋತಿಷ ಒಂದು ವಿಜ್ಞಾನ ಎಂದು ಸಾಧಿಸಲು ನಮಗೆ ಸಾಧ್ಯವಾಗುವುದಿಲ್ಲ. ಆದುದರಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ಇಂದು ಜರೂರಾಗಿ ಆಗಬೇಕಾಗಿದೆ.
ನಾವು ನೆನಪಿನಲ್ಲಿಡಬೇಕಾದ ಮತ್ತೊಂದು ವಿಷಯವೆಂದರೆ ಎಲ್ಲಾ ಉಪಕರಣಗಳಿಗೂ ಒಂದು ಸಾಧ್ಯತೆಯ ಮಿತಿ ಇರುತ್ತದೆ. ಅಂತಹ ಮಿತಿಯನ್ನು ಗುರುತಿಸಿಕೊಂಡೇ ಉಪಕರಣಗಳನ್ನು ಉಪಯೋಗಿಸುತ್ತೇವೆ. ಜ್ಯೋತಿಷದಲ್ಲಿಯೂ ಅದರ ಸಾಧ್ಯತೆಯ ಇತಿಮಿತಿಗಳನ್ನು ಅರಿತುಕೊಂಡೇ ನಾವು ಪ್ರವರ್ತಿಸಬೇಕಾಗುತ್ತದೆ. ಜೀವನದ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರವಿದೆ ಎಂಬ ಹುಂಭತನದಿಂದ ಪ್ರವರ್ತಿಸಿದರೆ ನಾವು ನಿರಾಶರಾಗುವುದು ಖಂಡಿತ. ಜ್ಯೋತಿಷದ ಸಲಹೆಗಳು ಮತ್ತು ಪರಿಹಾರಗಳು ಮನುಷ್ಯನ ಸಮಸ್ಯೆಗಳ ಪರಿಹಾರಕ್ಕೆ ಒಂದು ವೇದಿಕೆಯನ್ನು ಸೃಷ್ಟಿಸಿದಾಗ ಮಾತ್ರ ಜ್ಯೋತಿಷ ಸಾರ್ಥಕವಾಗುತ್ತದೆ,ಒಂದು ಉಪಯೋಗಿ ಸಾಹಿತ್ಯವಾಗುತ್ತದೆ.
ವಿಷಯಾನುಕ್ರಮಣಿಕೆ
ಭಾಗ ಒಂದು - ಪದಕೋಶ
ಭಾಗ ಎರಡು - ಮಾಹಿತಿ ಕೋಶ
*1. ಕಾಲಾಂಗ*
1. ರಾಶಿಭಾವ
2. ಗ್ರಹಗಳು
3. ಕಾಲ ಸಂವತ್ಸರ
4. ಪಂಚಾಂಗ
*2. ಸಹಜಾಂಗ*
1. ಜೈಮಿನಿ
2. ತಾಜಕ
3. ಲಾಲ್ ಕಿತಾಬ್
*3. ಉಪಾಂಗ*
1. ಭಾವ ಚಿಂತನ
2.ದೆಸೆ
3. ಯೋಗಗಳು
4. ಅಷ್ಟಕವರ್ಗ
*4. ಪ್ರಶ್ನಾಂಗ*
1. ಪ್ರಶ್ನೆಶಾಸ್ತ್ರ
2. ರಾಜಪ್ರಶ್ನೆ
3. ಕೂಪಪ್ರಶ್ನೆ
4. ಭೋಜನ ಪ್ರಶ್ನೆ
5. ನಷ್ಟ ಪ್ರಶ್ನೆ
*5. ಶುಭಾಂಗ*
1. ದೇವಪ್ರಶ್ನೆ - ಅಷ್ಟಮಂಗಲ
2. ಮೇಳಾಮೇಳಿ
3. ಮುಹೂರ್ತ
4. ಗೋಚಾರಫಲ
*6. ಕಲ್ಪಾಂಗ*
1. ವಾಸ್ತು
2. ಅಶೌಚ
3. ಗೌಳಿಪತನ, ಅಂಗಸ್ಸುರಣ, ದೋಷಜಾತಕ ಇತ್ಯಾದಿ
Comments